ಕಲಾನಿಧಿ ಮಾರನ್ ಅವರು ಸನ್ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರು. ಇವರು ಭಾರತೀಯ ಮಾಧ್ಯಮ ಮಾಲೀಕರಾಗಿದ್ದಾರೆ. ಅವರು ದೂರದರ್ಶನ ಚಾನೆಲ್‌ಗಳು, ಪತ್ರಿಕೆಗಳು, ವಾರಪತ್ರಿಕೆಗಳು, ಎಫ್. ಎಂ ರೇಡಿಯೋ ಕೇಂದ್ರಗಳು, ಡಿಟಿಎಚ್ ಸೇವೆಗಳು, ಕ್ರಿಕೆಟ್ ತಂಡ ( ಸನ್‌ರೈಸರ್ಸ್ ಹೈದರಾಬಾದ್ ) ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಅವರು ೨೦೧೦ ರಿಂದ ೨೦೧೫ ರವರೆಗೆ ಭಾರತೀಯ ವಿಮಾನಯಾನ ಸ್ಪೈಸ್ ಜೆಟ್‌ನಲ್ಲಿ ಪ್ರಮುಖ ಪಾಲನ್ನು ಹೊಂದಿದ್ದರು. == ವೃತ್ತಿ == ೧೯೯೦ ರಲ್ಲಿ, ಮಾರನ್ ತಮಿಳಿನಲ್ಲಿ ಪೂಮಾಲೈ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ೧೪ ಏಪ್ರಿಲ್ ೧೯೯೩ ರಂದು ಅವರು ಸನ್ ಟಿವಿಯನ್ನು ಸ್ಥಾಪಿಸಿದರು. ಸನ್ ಟಿವಿಯು $೧೩೩ ಮಿಲಿಯನ್‌ಗೆ ೧೦% ಷೇರು ಬಂಡವಾಳ ಸಂಗ್ರಹಿಸಿದ್ದರಿಂದ, ೨೪ ಏಪ್ರಿಲ್ ೨೦೦೬ ರಂದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬಿಲಿಯನೇರ್ ಪಟ್ಟಿಯಲ್ಲಿ ಸೇರಿಸಲಾಯಿತು. ಆ ಸಂಧರ್ಭದಲ್ಲಿ ಭೇಟಿ ನೀಡಿದ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಮಾರನ್ ಅವರೂ ಒಬ್ಬ ಪ್ರತಿನಿಧಿಯಾಗಿದ್ದರು. ೨೦೨೩ ರ ಹೊತ್ತಿಗೆ, ಅವರು ಯುಎಸ್$೩ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ೭೭ ನೇ ಶ್ರೀಮಂತ ಭಾರತೀಯರಾಗಿದ್ದರು. ಇವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ಮಾರನ್ ಮತ್ತು ಅವರ ಪತ್ನಿ ಕಾವೇರಿ ಅವರು ಭಾರತೀಯ ಕಾರ್ಯನಿರ್ವಾಹಕ ವೇತನ ಪಟ್ಟಿಯಲ್ಲಿ ತಲಾ ರೂ.೬೨ ಕೋಟಿ (ಯುಎಸ್$೭.೮ ಮಿಲಿಯನ್) ಪ್ಯಾಕೇಜ್‌ನೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿ ಸ್ಥಾನ ಪಡೆದಿದ್ದಾರೆ. ಅವರು ಸಿ‌ಎನ್‌ಬಿ‌ಸಿ ಮತ್ತು ಅರ್ನ್ಸ್ಟ್ & ಯಂಗ್ ನಿಂದ ಯುವ ಉದ್ಯಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೋರ್ಬ್ಸ್ ನಿಯತಕಾಲಿಕವು ಅವರನ್ನು "ದಕ್ಷಿಣ ಭಾರತದ ದೂರದರ್ಶನ ರಾಜ" ಎಂದು ಹೆಸರಿಸಿದೆ. == ವೈಯಕ್ತಿಕ ಜೀವನ == ಕಲಾನಿಧಿ ಮಾರನ್ ಅವರು ಭಾರತದ ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗ. ಅವರ ಕಿರಿಯ ಸಹೋದರ ದಯಾನಿಧಿ ಮಾರನ್ ಕೂಡ ಮಾಜಿ ಸಚಿವರಾಗಿದ್ದರು. ಕಲಾನಿಧಿ ಮಾರನ್ ಕೊಡಗು ಮೂಲದ ಕಾವೇರಿಯವರನ್ನು ವಿವಾಹವಾದರು. ದಂಪತಿಗೆ ಕವಿಯಾ ಕಲಾನಿಧಿ ಮಾರನ್ ಎಂಬ ಮಗಳಿದ್ದಾಳೆ (ಜನನ ನವೆಂಬರ್ ೩, ೧೯೯೧). ಅವರು ಡಾನ್ ಬಾಸ್ಕೋ, ಎಗ್ಮೋರ್ , ಚೆನ್ನೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಅವರು ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಮಾಡಿದರು. ೨೦೨೩ ರ ಹೊತ್ತಿಗೆ, ಅವರ ನಿವ್ವಳ ಮೌಲ್ಯ ಯುಎಸ್$೩ ಬಿಲಿಯನ್ ಆಗಿದೆ. == ಉಲ್ಲೇಖಗಳು ==